ಅಡಿಕೆ

ಸಾಮಾನ್ಯವಾಗಿ ಅಡಿಕೆ ಗಿಡಗಳನ್ನು ನಾಟಿ ಮಾಡಿದ ನಂತರ ಉತ್ತಮವಾಗಿ ಹಾರೈಕೆ ಮಾಡಿದರೆ ಮೂರು ವರ್ಷ ಆರು ತಿಂಗಳಿನಿಂದ ಫಸಲು ನೀಡುವ ಸಾಧ್ಯತೆ ಇದೆ.

2.  ನಾಟಿ ಮಾಡಲು ಸೂಕ್ತ ಗಿಡಗಳ ಆಯ್ಕೆ ಮಾಡುವುದು ಹೇಗೆ ?

ತಳಿಯನ್ನು  ಆಯ್ಕೆ ಮಾಡಿದ ನಂತರ, ಸುಮಾರು 45 ಸೆಂ. ಮೀಟರ್(18 ಇಂಚು) ಇರುವ ಮತ್ತು ಕನಿಷ್ಟ 5 ಎಲೆ ಇರುವ ಸಸಿಯನ್ನು ಆಯ್ದುಕೊಳ್ಳುವುದು ಉತ್ತಮ.

3. ಅಡಿಕೆ ತಳಿಯ ಆಯ್ಕೆ ಮಾಡುವುದು ಹೇಗೆ ?

ಇದು ಕ್ಲಿಷ್ಟವಾದ ಪ್ರಶ್ನೆ, ಈ ವಿಷಯದಲ್ಲಿ ರೈತರು ಪ್ರಯೋಗ ಮಾಡುವುದು ಸಲ್ಲ, ಆದುದರಿಂದ ಅವರು ಸ್ವಲ್ಪ ಸಮಯವನ್ನು ತಳಿಯ ಆಯ್ಕೆಯಲ್ಲಿ ಮೀಸಲಿಡುವುದು ಅವಶ್ಯ.  ಸಾಮಾನ್ಯವಾಗಿ ರೈತರು ತಾವು ಬೆಳೆ ಮಾಡುವ ಪರಿಸರದಲ್ಲಿ ಉತ್ತಮ ಇಳುವರಿ, ಗುಣಮಟ್ಟ, ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಇದಕ್ಕೆ ಪ್ರಯೋಗ ಮಾಡುವ ಬದಲು, ತಮ್ಮ ಸಹ ರೈತರ ಜೊತೆ ಮಾಹಿತಿ ವಿನಿಮಯ ಮಾಡಿಕೊಂಡು, ಆ ಪರಿಸರದಲ್ಲಿ ಉತ್ತಮ ಬೆಳೆ ಮಾಡುತ್ತಿರುವ ರೈತರನ್ನು ಗಮನಿಸಿ ಅವರು ಬಳಸಿರುವ ತಳಿಯನ್ನು ಆಯ್ಕೆ ಮಾಡುವುದು ಉತ್ತಮ.

4.  ಅಡಿಕೆ ನಾಟಿ ಮಾಡಲು ಉತ್ತಮ ಸಮಯ ಯಾವುದು ?

6. ಅಡಿಕೆ ಮರಗಳ ಮದ್ಯೆ ಅಂತರ ಎಷ್ಡು ಅಡಿಗಳಿದ್ದರೆ ಉತ್ತಮ.

ಅಡಿಕೆ ಮರಗಳ ಮದ್ಯೆ ಅಂತರ ಬಹಳ ಮುಖ್ಯವಾದ ನಿಯತಾಂಕ, ಇದನ್ನು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸುವುದು ಉತ್ತಮ. ಉದಾಹರಣೆಗೆ ಎರಡು ಮರಗಳ ಮತ್ತು ಸಾಲುಗಳ ಮದ್ಯೆ ಕಳೆ ನಿಯಂತ್ರಿಸಲು ಸುಲಭವಾಗಿ ಟ್ರ್ಯಾಕ್ಟರ್ ಓಡಿಸುವಂತಿರ ಬೇಕು, ಅಂತರ ಬೆಳೆ ಮಾಡಲು ಅನುಕೂಲವಾಗಿರಬೇಕು, ಈ ಕಾರಣಗಳಿಂದ 8 x 8 ಅಥವಾ 8 x 9 ಅಡಿಗಳ ಅಂತರ ಸೂಕ್ತವೆಂದು ಕೆಲ ಪ್ರಗತಿ ಪರ ರೈತರ ಹೇಳಿಕೆ.

ಮೇ, ಜೂನ್, ಸೆಪ್ಟೆಂಬರ್,  ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ನಾಟಿ ಮಾಡುವುದು ಉತ್ತಮ.

5. ಅಡಿಕೆಗೆ ಯಾವಾಗ ಕೊಟ್ಟಿಗೆ ಗೊಬ್ಬರ ನೀಡುವುದು ಉತ್ತಮ ?

ಅಡಿಕೆಗೆ ಕೊಟ್ಟಿಗೆ ಗೊಬ್ಬರ ಅತಿ ಮುಖ್ಯ, ಒಂದು ವರ್ಷದಲ್ಲಿ ವಿಭಜಿಸಿ ಎರಡು ಸಲ ನೀಡುವುದು ಉತ್ತಮ. ಸಾಮಾನ್ಯವಾಗಿ ಮಾರ್ಚ - ಏಪ್ರಿಲ್ ಮತ್ತು ಸೆಪ್ಟೆಂಬರ್ - ಅಕ್ಟೋಬರ್ ತಿಂಗಳುಗಳಲ್ಲಿ ನೀಡುವುದು ಉತ್ತಮ.

6. ಅಡಿಕೆ ಮರಗಳ ಮದ್ಯೆ ಅಂತರ ಎಷ್ಡು ಅಡಿಗಳಿದ್ದರೆ ಉತ್ತಮ.

ಅಡಿಕೆ ಮರಗಳ ಮದ್ಯೆ ಅಂತರ ಬಹಳ ಮುಖ್ಯವಾದ ನಿಯತಾಂಕ, ಇದನ್ನು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸುವುದು ಉತ್ತಮ. ಉದಾಹರಣೆಗೆ ಎರಡು ಮರಗಳ ಮತ್ತು ಸಾಲುಗಳ ಮದ್ಯೆ ಕಳೆ ನಿಯಂತ್ರಿಸಲು ಸುಲಭವಾಗಿ ಟ್ರ್ಯಾಕ್ಟರ್ ಓಡಿಸುವಂತಿರ ಬೇಕು, ಅಂತರ ಬೆಳೆ ಮಾಡಲು ಅನುಕೂಲವಾಗಿರಬೇಕು, ಈ ಕಾರಣಗಳಿಂದ 8 x 8 ಅಥವಾ 8 x 9 ಅಡಿಗಳ ಅಂತರ ಸೂಕ್ತವೆಂದು ಕೆಲ ಪ್ರಗತಿ ಪರ ರೈತರ ಹೇಳಿಕೆ.

7. ಅಡಿಕೆ ತೋಟದಲ್ಲಿ ಕಳೆ ನಿರ್ವಹಣೆ ಮಾಡುವುದು ಹೇಗೆ ?

ಅಡಿಕೆಯಲ್ಲಿ ಕಳೆ ಉತ್ತಮವಾಗಿ ನಿರ್ವಹಣೆ ಮಾಡುವುದುರಿಂದ ಇಳುವರಿಯನ್ನು ಹೆಚ್ಚಿಸಬಹುದಾಗಿದೆ.  ಸಮಯದಿಂದ ಸಮಯಕ್ಕೆ ಕೆಲ ವಿಧಾನಗಳನ್ನು ಪಾಲಿಸಿದಲ್ಲಿ ಸುಲಭವಾಗಿ ಕಳೆಯನ್ನು ನಿರ್ವಹಣೆ ಮಾಡಬಹುದು.

8. ಅಡಿಕೆ ಬೆಳೆಗೆ ಸಾಮಾನ್ಯವಾಗಿ ಕಾಡುವ ರೋಗಗಳು ಯಾವುವು ?

ಕೊಳೆ, ಗೊನೆ ಒಣಗುವ, ಸುಳಿ ಕೊಳೆ, ನುಸಿ, ಸುಳಿ ಒಣಗುವ, ಅಣಬೆ ರೋಗ, ಬುಡ ವಿಸರ್ಜನೆ, ಹಿಡುಮುಂಡಿಗೆ, ಹಳದಿ ಎಲೆ ರೋಗ, ಹೀಗೆ ಅನೇಕ ರೋಗಗಳು ಅಡಿಕೆ ಬೆಳೆಯನ್ನು ಕಾಡುತ್ತವೆ.  ಆದರೆ ಇವು ಪರಿಸರದಿಂದ ಪರಿಸರಕ್ಕೆ, ವಾತಾವರಣ ವ್ಯತ್ಯಾಸದಿಂದ ಈ ರೋಗಗಳು ಬರುತ್ತವೆ, ತೋಟಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿದಲ್ಲಿ, ರೋಗಗಳಿಂದ ಅಡಿಕೆ ಮರಗಳನ್ನು ಪಾರುಮಾಡಿ ಉತ್ತಮ ಇಳುವರಿಯನ್ನು ಪಡೆಯಬಹುದು.

9. ಅಡಿಕೆಗೆ ಕಾಡುವ ಸಾಮಾನ್ಯ ಕೀಟಗಳು ಯಾವುವು ?

ಇತರೆ ಬೆಳೆಗಳ ಹಾಗೆ ಅಡಿಕೆಗೂ ಅನೇಕ ಕೀಟಗಳ ಉಪಟಳವಿದೆ, ಅವುಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಿದ್ದೇವೆ. ಎಳೆ ಎಲೆ ಕೀಟ (SPINDLE BUG), ಹೇನು (MITES), ಹೂಗೊಂಚಲು ಹುಳ (INFLORESENCE CATERPILLAR), ಗೊಣ್ಣೆಹುಳ (ROOT GRUB) ಹೀಗೆ ಇನ್ನೂ ಅನೇಕ ಕೀಟಗಳಿವೆ.

10. ಅಡಿಕೆಯಲ್ಲಿ ಯಾವ ಬೆಳೆಗಳನ್ನು ಅಂತರ ಬೆಳೆಗಳಾಗಿ ಬೆಳೆಯಬಹುದು ?

ಶುಂಠಿ, ಬಾಳೆ, ಅರಶಿನ, ಅಲವಿಗಡ್ಡೆ / ಕೆಸವಿನಗಡ್ಡೆ, ದವಣ, ಕಾಳು ಮೆಣಸು, ವೀಳ್ಯದೆಲೆ, ಅಶ್ವಗಂಧ, ಕೊಕೊ ಹೀಗೆ ಅನೇಕ ಬೆಳೆಗಳನ್ನು ಅಂತರ ಬೆಳೆಗಳಾಗಿ ಅಡಿಕೆಯಲ್ಲಿ ಯಶಸ್ವಿಯಾಗಿ ಬೆಳೆಯಬಹುದು.

11. ಅಡಿಕೆ ತೋಟಕ್ಕೆ ಬರುವ ಅಣಬೆ ರೋಗದ ನಿರ್ವಹಣೆ ಮಾಡುವುದು ಹೇಗೆ ?

ಸಾಮಾನ್ಯವಾಗಿ ಅತಿ ಕಡಿಮೆ ಕೊಟ್ಟಿಗೆ ಗೊಬ್ಬರ ಅಥವಾ ಬಹಳ ವರ್ಷಗಳು ಕೊಟ್ಟಿಗೆ ಗೊಬ್ಬರ ಬಳಸದ ಕಾರಣ, ಮಣ್ಣಿನಲ್ಲಿರುವ ಶಿಲೀಂದ್ರಗಳು ಅಡಿಕೆ ಅಥವಾ ಯಾವುದೇ ಮರದ ಆಸರೆ ಪಡೆದು ಬೆಳೆಯಲಾರಂಭಿಸುತ್ತವೆಯೆಂದು ತಿಳಿದು ಬಂದಿದೆ.  ಈ ಕಾರಣದಿಂದಾಗಿ ಪ್ರತಿ ವರ್ಷ ತಪ್ಪದೆ ಕೊಟ್ಟಿಗೆ ಗೊಬ್ಬರ ಬಳಸುವುದು ಉತ್ತಮ ಅಭ್ಯಾಸ.

ಅಣಬೆ ರೋಗ ಬಂದ ಮರಗಳನ್ನು ಇದುವರೆವಿಗೂ ರಕ್ಷಿಸಿ ಮತ್ತೆ ಬೆಳೆಯುವಂತೆ ಮಾಡಿರುವ ಯಾವುದೇ ಉದಾಹರಣೆಗಳು ನಮ್ಮ ಮುಂದೆ ಕಂಡು ಬಂದಿಲ್ಲ.  ಆದರೆ ಈ ಶಿಲೀಂದ್ರದಿಂದ ಸೋಂಕಿತ ಮರಗಳನ್ನು ಬೇರ್ಪಡಿಸಿ ಇತರ ಮರಗಳಿಗೆ ಹಬ್ಬದಂತೆ ರಕ್ಷಿಸಬಹುದಾಗಿದೆ.

12. ಎಳೆ ಎಲೆ ರಸ ಹೀರುವ ಕೀಟ ಅಥವಾ ಸ್ಪಿಂಡ್ಲ ಬಗ್ಗ (SPINDLE BUG), ಕೀಟದಿಂದ ಹಾನಿಗೊಳಗಾದ ಅಡಿಕೆ ಗಿಡ ಅಥವಾ ಮರವನ್ನು ಗುರುತಿಸುವುದು ಹೇಗೆ ಮತ್ತು ಅದಕ್ಕೆ ಸಾವಯವದಲ್ಲಿ ಪರಿಹಾರವೇನು ?

ಎಳೆ ಎಲೆ ರಸ ಹೀರುವ ಅಥವಾ SPINDLE BUG ಎನ್ನುವ ಕೀಟದಿಂದ ಉಂಟಾಗುವ ಪರಿಣಾಮದ ಕೆಲ ಚಿತ್ರಗಳನ್ನು ಕೆಳಗೆ ಕೊಡಲಾಗಿದೆ ತಿಳಿಸಿ.  ಸಾವಯವದಲ್ಲಿ ಇದಕ್ಕೆ ಪರಿಹಾರವಾಗಿ ಸಾಯಿಲ್ ಸ್ಟಾರ್ ಅಡ್ವಾನ್ಸಡ್ (SOIL STAR ADVANCED) / KRUSHI NIRMAN / SOIL REFRESH ದ್ರಾವಣವನ್ನು ನೀಡುವುದು. ಇದು ನೀಡುವುದರಿಂದ ಕೀಟಗಳನ್ನು ಹಿಮ್ಮೆಟ್ಟಿಸವ ಶಕ್ತಿ ಅಡಿಕೆ ಮರಕ್ಕೆ ಹೆಚ್ಚುತ್ತದೆ, ಆದುದರಿಂದ ದೊಡ್ಡ ಮರಗಳಿಗೆ ಯಾವುದೇ ರೀತಿ ಬಹಳ ಕಷ್ಟ ಪಟ್ಟು ಸಿಂಪಡಣೆ ಮಾಡುವ ಅವಶ್ಯವಿರುವುದಿಲ್ಲ.  ಚಿಕ್ಕ ಗಿಡಗಳಾದರೆ, ನೇರವಾಗಿ "ಸಾಯಿಲ್ ಕ್ಲೀನ್" (SOIL CLEAN) ಎಂಬ ದ್ರಾವನವನ್ನು 2.5 ಮಿ ಲಿ. ಒಂದು ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಮತ್ತು ಇದನ್ನು ಮತ್ತೊಮ್ಮೆ ಒಂದು ವಾರದ ನಂತರ ಸಿಂಪಡಿಸುವುದು.

13. ಅಡಿಕೆ ಹೂಗೊಂಚಲು ಹುಳ (Inflorescence caterpillar) ಬಾಧಿತ ಅಡಿಕೆ ಮರವನ್ನು ಗುರುತಿಸುವುದು ಹೇಗೆ ಮತ್ತು  ಸಾವಯವ ಪರಿಹಾರಗಳೇನು ?


ಈ ಚಿತ್ರದಲ್ಲಿ ತೋರಿಸಿದ ಹಾಗೆ ಹೂ ಮತ್ತು ಎಳೆ ಕಾಯಿ ಇರುವ ಗೊನೆ ಕಾಣಿಸುತ್ತದೆ ಮತ್ತು ಅಂಟು ಸುರಿಯಬಹುದು. ರೈತರು ಇಂತಹ ಲಕ್ಷಣಗಳು ಕಂಡಾಗ ಇದೇ ಹುಳದ ಪರಿಣಾವೆಂದು ತಿಳಿಯ ಬೇಕು.  ಈ ಸಮಸ್ಯೆಗೆ ಅನೇಕ ಪರಿಹಾರಗಳಿವೆ.

14. ಗೋಣ್ಣೆ ಹುಳ / ಬೇರು ಹುಳ ದಿಂದ ಬಾಧಿತ ಅಡಿಕೆ ಮರಗಳನ್ನು ಗುರುತಿಸುವುದು ಹೇಗೆ ಮತ್ತು ಸಮಸ್ಯೆಗೆ ಸಾವಯವ ಪರಿಹಾರಗಳೇನು ?

ಈ ಕೆಳಗೆ ನೀಡಿರುವ ಚಿತ್ರಗಳು, ಗೊಣ್ಣೆ ಹುಳದಿಂದ ಬಾಧಿತ ಅಡಿಕೆ ಮರಗಳನ್ನು ತೋರಿಸುತ್ತವೆ.  ಇವುಗಳ ಉಪಟಳದಿಂದ ಕೇವಲ ಇಳುವರಿಯಲ್ಲದೆ ಮರಗಳೇ ಕಳೆದು ಕೊಳ್ಳವ ಸಂಭವವಿರುತ್ತದೆ.  ಈ ಸಮಸ್ಯೆಯು  ಸಾಮಾನ್ಯವಾಗಿ ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆವಿಗೆ ಇರುತ್ತದೆ ಹಾಗು ಮರಳು ಮಿಶ್ರಿತ ಭೂಮಿಯಲ್ಲಿ ಹೆಚ್ಚು.  ಈ ಸಮಸ್ಯೆಗೆ ಮೂಲ ಕಾರಣ ಸರಿಯಾದ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ನೀಡದಿರುವುದು, ಅಥವಾ ಕೊಟ್ಟಿಗೆ ಗೊಬ್ಬರವನ್ನೇ ಕೊಡದಿರುವುದು.  ಈ ಸಮಸ್ಯಗೆ ಹಲವು ಸಾವಯವ ಪರಿಹಾರೋಪಾಯಗಳನ್ನು ನೀಡಲಾಗಿದೆ.

15. ಬಿಳಿ ಹೇನು ಮತ್ತು ಕೆಂಪು ಹೇನು ಮತ್ತು ನಿರ್ವಹಣೆ. (WHITE & RED MITES)

ಕೆಂಪು ಮತ್ತು ಬಿಳಿ ಹೇನು(WHITE & RED MITES) ಈ ಸಮಸ್ಯೆಯು ಒಣ ಹವೆ ಮತ್ತು ಬೇಸಿಗೆಯಲ್ಲಿ ಹೆಚ್ಚು.  ಇವು ರಸ ಹೀರುವ ಕೀಟಗಳಾಗಿರುವ ಕಾರಣ, ಎಳೆ ಎಲೆ, ಎಳೆ ಅಡಿಕೆ ಗೊಂಚಲಿನ ಮೇಲೆ ದಾಳಿ ಮಾಡಿ ಬೆಳೆಯ ಗುಣಮಟ್ಟ ಮತ್ತು ನಷ್ಟಕ್ಕೆ ಕಾರಣವಾಗುತ್ತವೆ.

ಉದ್ದ ಮರಗಳಿಗೆ ಯಾವುದೇ ಕೀಟನಾಶಕಗಳನ್ನು ಸಿಂಪಡಿಸುವುದು ಕಷ್ಟಕರ ಮತ್ತು ಬಹಳ ಅಪಾಯವಾದ ಕಾರಣ, ನಾವು ಇಲ್ಲಿ ಕೆಲ ಕಾರಣಗಳನ್ನು ಮತ್ತು ಸುಲಭ ವಿಧಾನಗಳನ್ನು ತಿಳಿಯ ಭಯಸುತ್ತೇವೆ.

ಹೇನುಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಡು ಹಸಿರು ಬಣ್ಣದ ಯಾವುದೇ ಗಿಡ ಮತ್ತು  ಭೂಮಿಯಲ್ಲಿ ತಾಮ್ರದ ಅಂಶ ಕಡಿಮೆಯಾದಾಗ ಹೇನುಗಳ ಉಪಟಳ ಹೆಚ್ಚಿರುವುದು ತಿಳಿದು ಬಂದಿದೆ.

ಇದಕ್ಕೆ ಪರಿಹಾರವಾಗಿ "SOIL STAR - ARECA PRIDE" ಎಂಬ ದ್ರಾವಣವನ್ನು ಒಂದು ಎಕರೆಗೆ 10 ಲೀ. ನೀರಿನಲ್ಲಿ ಮಿಶ್ರಣಮಾಡಿ ಒಂದು ಎಕರೆಯಲ್ಲಿರುವ ಎಲ್ಲಾ ಅಡಿಕೆ ಮರಗಳಿಗೆ ನೀಡುವುದರಿಂದ ಅಡಿಕೆ ಮರ ಅಥವಾ ಗಿಡಗಳ ಎಲೆ ಬಣ್ಣ ಗಿಣಿ ಹಸಿರಾಗಿ ಬದಲಾಗುತ್ತದೆ ಮತ್ತು ತಾಮ್ರದ ಅಂಶ ಹೆಚ್ಚಿಗೆ ಮರ ಹೀರಿಕೊಳ್ಳುವ ಹಾಗೆ ಮಾಡಿ ಎಲ್ಲಾ ತರಹದ ಹೇನುಗಳು ವಿಕರ್ಷಣೆಗೊಳ್ಳುವ ಹಾಗೆ ಮಾಡುತ್ತದೆ.

16. ಅಡಿಕೆಯಲ್ಲಿ ಅರಳು ಉದರುವುದೆಂದರೇನು ? ಅದಕ್ಕೆ ಕಾರಣಗಳು ಮತ್ತು ಪರಿಹಾರವನ್ನು ತಿಳಿಸಿ.

ಅಡಿಕೆ ಮರ ಫಸುಲು ನೀಡುವ ಸಮಯದಲ್ಲಿ ಅಡಿಕೆ ಕಾಯಿಗಳು ಉದುರಿದಲ್ಲಿ ಅರಳು ಉದುರುತ್ತಿದೆಯೆಂದು ರೈತರು ಅವರ ಭಾಷೆಯಲ್ಲಿ ಹೇಳುವುದುಂಟು.

ಈ ಸಮಸ್ಯೆಗೆ ಹಲವು ಕಾರಣಗಳಿವೆ.

ಪರಿಹಾರ: AVAF-18 ಎಂಬ ದ್ರಾವಣವನ್ನು ಒಂದು ಲೀ. ನೀರಿಗೆ 3 ಮಿ.ಲಿ. ಯಷ್ಟು ಮಿಶ್ರಣ ಮಾಡಿ ಸಿಂಪಡಿಸುವುದು.  ಬೆಳೆಯ ಅವಧಿ ಮತ್ತು ವಾತಾವರಣವನ್ನು ಆಧರಿಸಿ 2 ರಿಂದ 3 ಸಲ ಸಿಂಪಡಿಸ ಬೇಕಿರುತ್ತದೆ.

ಪರಿಹಾರ: ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ ತಪ್ಪದೆ ನೀಡುವುದು ತಕ್ಷಣವೇ  ಒಂದು ಎಕರೆಯಲ್ಲಿರುವ ಎಲ್ಲಾ ಮರಗಳಿಗೆ 10 ಲೀ. SOIL STAR - ARECA PRIDE ಗಿಡ ಅಥವಾ ಮರಗಳ ಬುಡಕ್ಕೆ ನೀಡುವುದು.  ಕೊಟ್ಟಿಗೆ ಗೊಬ್ಬರ ನೀಡಿದ 6 ತಿಂಗಳಿನಲ್ಲಿ ದ್ವಿದಳ ಧಾನ್ಯಗಳನ್ನು ಹಾಕಿ ಮಲ್ಚಿಂಗ್ ಪದ್ಧತಿಯನ್ನು ಅನುಸರಿಸಿ ತಕ್ಷಣವೇ ಒಂದು ಎಕರೆಯಲ್ಲಿರುವ ಎಲ್ಲಾ ಮರಗಳಿಗೆ 10 ಲೀ. SOIL STAR - ARECA PRIDE ಗಿಡ ಅಥವಾ ಮರಗಳ ಬುಡಕ್ಕೆ ನೀಡುವುದು.  ಈ ವಿಧಾನದ ಅನುಕರಣೆಯಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ.

ಪರಿಹಾರ: ಎಲ್ಲಾ ಮರಗಳ ಬುಡಗಳಿಗೆ ಅಂಟು ಬಳಿಯುವುದು., ಅಥವಾ ತೋಟದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಪ್ಲಾಸ್ಟಿಕ್ ಪಟ್ಟಿಯನ್ನು ಕಟ್ಟುವ ಮೂಲಕ, ಆ ಶಬ್ದಗಳಿಗೆ ಇಲಿ ಮತ್ತು ಅಳಿಲುಗಳನ್ನು ಓಡಿಸ ಬಹುದಾಗಿದೆ.

17. ಅಡಿಕೆ ಗಿಡದ ಬುಡದಲ್ಲಿ ಅಂಟು ಸೋರುತ್ತಿದೆ ಕಾರಣವೇನು ?

ಅಡಿಕೆ ಮರಗಳ ಬುಡದಲ್ಲಿ ರಸ ಸೋರುವುದು ಒಂದು ಶಿಲೀಂದ್ರ ಸೋಂಕು, ಇದಕ್ಕೆ ಕಾರಣ ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಅಸಮತೋಲನ. ಈ ಅಸಮತೋಲನಕ್ಕೆ ಮುಖ್ಯ ಕಾರಣ, ತೋಟದ ಅಸಮರ್ಪಕ ನಿರ್ವಹಣೆಯಿಂದ ಸಾವಯವ ಇಂಗಾಲದ ಕೊರತೆ.

18. ಅಡಿಕೆ ಗಿಡದ ಬುಡದಲ್ಲಿ ಅಂಟು ಸೋರುವುದು ಅಪಾಯವೇ ? ಹಾಗಿದ್ದರೆ ಅದನ್ನು ನಿರ್ವಹಿಸುವುದು ಹೇಗೆ ?

ಬುಡ ವಿಸರ್ಜನೆ ಅಥವಾ ಬುಡದಲ್ಲಿ ರಸ ಸೋರುವುದು ಬಹಳ ಅಪಾಯಕರ ಅದರಲ್ಲಿ ಯಾವುದೇ ಸಂದೇಹವಿಲ್ಲ.   ಕೇವಲ ರೋಗ ಕಾರಕದಿಂದ ಮರ ಸಾಯುವುದಲ್ಲದೆ ಇತರೇ ಮರಗಳಿಗೆ ಹರಡ ಬಹುದಾಗಿದೆ. ಆದ ಕಾರಣ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.

ನಿರ್ವಹಣೆ: ಭಾದಿತ ತೋಟಕ್ಕೆ ಸುಣ್ಣ ಮತ್ತು ಬೂದಿ ಮಿಶ್ರಿತ ಕೊಟ್ಟಿಗೆ ಗೋಬ್ಬರವನ್ನು ನೀಡಿ, ನೀರು ಕೊಟ್ಟು SOIL STAR -ARECA PRIDE ದ್ರಾವಣವನ್ನು ಒಂದು ಎಕರೆಗೆ 10 ಲೀ. ನೀಡುವುದು.  ಭಾದಿತ ಮರಗಳಿಗೆ ಸ್ವಲ್ಪ ಹೆಚ್ಚಿಗೆ ನೀಡುವುದು.  ಈ ವಿಧಾನವನ್ನು 6 ತಿಂಗಳಿಗೊಮ್ಮೆ ಮಾಡುವುದು.

ರಸ ಸೋರುವ ಸ್ಥಳಕ್ಕೆ AVAF-18 ದ್ರಾವಣವನ್ನು 5.0 ಮಿ.ಲಿ.ಒಂದು ಲೀ. ನೀರಿಗೆ ಬೆರೆಸಿ ಪಿಚಕಾರಿ ಮಾಡುವುದು, ಮತ್ತು ಅದೇ ಸ್ಥಳವನ್ನು ನಾಟಿ ಹಸುವಿನ ಸಗಣಿಯನ್ನು ಹಚ್ಚುವುದು.  ಈ ವಿಧಾನವನ್ನು ವಾರಕ್ಕೊಮ್ಮೆಯಂತೆ 4 ವಾರಗಳು ಮಾಡಬೇಕಿರುತ್ತದೆ.

19. ಅಡಿಕೆಯಲ್ಲಿ ಕೊಳೆ ಅಂದರೇನು ? ಅದರ ಪರಿಣಾಮಗಳೇನು ಮತ್ತು ಪರಿಹಾರ ತಿಳಿಸಿ

ಅಡಿಕೆಯಲ್ಲಿ ಕೊಳೆ ರೋಗವೆಂದರೆ, ಅಡಿಕೆ ಗೊಂಚಲಿಗೆ ಶಿಲೀಂದ್ರ ಸೋಂಕಾಗಿರುವುದು.  ಸೋಂಕಿಗೆ ತುತ್ತಾದ ಗೊನೆಗಳಿಂದ ಅಡಿಕೆ ಕಾಯಿ ಉದುರುತ್ತದೆ ಮತ್ತು ಗೊನೆಯಲ್ಲಿರುವ ಕಾಯಿಗಳು ಕಪ್ಪು ಅಥವಾ ಬೂದು ಬಣ್ಣದಲ್ಲಿರುತ್ತವೆ.  ಇದಕ್ಕೆ ಮುಖ್ಯಕಾರಣ ವಾತಾವರಣದಲ್ಲಿ ಹೆಚ್ಚಿದ ತೇವಾಂಶ.  ಇದನ್ನು ತಕ್ಕ ಮಟ್ಟಿಗೆ ತಡೆದು ಉತ್ತಮ ಇಳುವರಿ ಪಡೆಯಲು ರೈತರು ಸಾಮಾನ್ಯವಾಗಿ ಬೋಡೋ ದ್ರಾವಣವನ್ನು 2 ರಿಂದ 3 ಸಲ ಅಡಿಕೆ ಗೊಂಚಲಿಗೆ ಸಿಂಪಡಿಸುತ್ತಾರೆ.

ಆದರೆ AVAF-18 ದ್ರಾವಣವನ್ನು ಒಂದು ಲೀ. ನೀರಿಗೆ 3.0 ಮಿ.ಲಿ. ಮಿಶ್ರಣ ಮಾಡಿ ಸಿಂಪಡಿಸುವುದು ಉತ್ತಮ ಫಲಿತಾಂಶ ನೀಡಿದೆ ಮತ್ತು ಸಿಂಪಡಣೆ ಮಾಡುವ ಜನರಿಗೆ ಯಾವುದೇ ತೊಂದರೆ ಇರುವುದಿಲ್ಲವೆಂದು ತಿಳಿದು ಬಂದಿದೆ.  ಇದನ್ನು ಸಹ 2 ರಿಂದ 3 ಸಲ ಸಿಂಪಡಣೆ ಮಾಡುವುದು ಉತ್ತಮ.

20. ಅಡಿಕೆ ಮರಗಳಿಗೆ ಗೆದ್ದಲಿನ ಸಮಸ್ಯೆ ನಿವಾರಿಸುವುದು ಹೇಗೆ ?

ಗೆದ್ದಲನ್ನು ನಾವು ಎಂದೂ ಶತ್ರು ಕೀಟವೆಂದು ಪರಿಗಣಿಸುವುದು ಬೇಡ.  ಆದರೂ ಗೆದ್ದಲಿನಿಂದ ಪರಿಹಾರ ಬಹಳ ಸುಲಭ.

21. ಅಡಿಕೆ ಮರಗಳಲ್ಲಿ ಹಿಡುಮುಂಡಿಗೆ ರೋಗ ಅಂದರೇನು ? ಮತ್ತು ಅದಕ್ಕೆ ಕಾರಣಗಳೇನು ?

ಹಿಡುಮುಂಡಿಗೆ ರೋಗ ಅಂತ ರೈತರು ವಾಡಿಕೆಯಾಗಿ ಕರೆಯುತ್ತಾರೆ, ಆದರೆ ಅದು ರೋಗವಲ್ಲ ಅದು ಸಸ್ಯ ಪೋಷಕಗಳ ಕೊರತೆಯಿಂದ ಉಂಟಾಗುವ ಒಂದು ರುಜಿನ.

ಹಿಡುಮಂಡಿಗೆ ಬಂದ ಅಡಿಕೆ ಮರದ ತಲೆ ಕುಬ್ಜವಾಗಿ ಕಾಣಿಸುತ್ತದೆ ಮತ್ತು ಅದರ ತಲೆ ಒಂದು ಕಡೆ ಬಾಗಿರುವ ಹಾಗೆಯೂ ಕಾಣಿಸ ಬಹುದು.  ಈ ಸಮಸ್ಯೆಗೆ ತಕ್ಷಣ ಪರಿಹಾರ ಹುಡುಕದಿದ್ದರೆ ಅಡಿಕೆ ಮರದ ತಲೆ ಕೆಳಗೆ ಬಿದ್ದು ಅಥವಾ ಕ್ರಮೇಣ ತಲೆ ಸಣ್ಣಗಾಗುತ್ತಾ ಸಾಯುವ ಅವಕಾಶಗಳು ಹೆಚ್ಚು.

ಈ ಸಮಸ್ಯೆಗೆ ಅನೇಕ ಕಾರಣಗಳಿವೆ, ಅವುಗಳಲ್ಲಿ ಕೆಲವನ್ನು ನೀಡಲಾಗಿದೆ.

22. ಅಡಿಕೆ ಮರಗಳಲ್ಲಿ ಹಿಡುಮುಂಡಿಗೆ ರೋಗವನ್ನು ಹೇಗೆ ಪರಿಹರಿಸ ಬಹುದು ?

ಈ ಸಮಸ್ಯೆಗೆ ಪರಿಹಾರಗಳು ಇವೆ, ಆದರೆ ಅದು ಹೆಚ್ಚು ಅಂದರೆ ಸುಮಾರು 1 ವರ್ಷದ ಅವದಿ ಬೇಕಿರುತ್ತದೆ ಮತ್ತು ಅತಿ ಹೆಚ್ಚು ಸಮಸ್ಯೆ ಹೊಂದಿರುವ ಅಡಿಕೆ ಮರದ ರಕ್ಷಣೆ ಕಷ್ಟ ಸಾಧ್ಯ.  ಆರಂಭಿಕ ಹಂತದಲ್ಲಿರುವ ಅಡಿಕೆ ಮರಗಳ ರಕ್ಷಣೆ ಮಾಡ ಬಹುದಾಗಿದೆ.  ಆದರೆ ರೈತರು ಆಸಕ್ತಿ ಮತ್ತು ಶ್ರಮ ವಹಿಸಿ ಮರಗಳ ಆರೈಕೆ ಮಾಡಿದರೆ ಮಾತ್ರ ಸಾಧ್ಯ.

ಈ ಸಮಸ್ಯೆಯು ಆರಂಭಿಕ ಹಂತದಲ್ಲಿ ಅಡಿಕೆ ತೋಟದ ಕೆಲ ಮರಗಳಲ್ಲಿ ಕಂಡು ಬರುತ್ತದೆ, ತಕ್ಷಣ ಎಚ್ಚೆತ್ತುಕೊಳ್ಳ ಬೇಕು ಇಲ್ಲವಾದರೆ ತೋಟದ ಎಲ್ಲಾ ಮರಗಳಿಗೆ ಇದೇ ಸಮಸ್ಯೆ ಖಚಿತ.

ಸಮಸ್ಯೆ ಕಂಡ ತಕ್ಷಣ ಎಲ್ಲಾ ಮರಗಳಿಗೆ 

ಅಕ್ಷಯ ಪೂರ್ಣ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ರೈತ ಸೇವಾ ಕೇಂದ್ರಗಳನ್ನು ಅಥವಾ ನಮ್ಮ ರೈತ ಸೇವಾ ಸಂಖ್ಯೆಯನ್ನು ಕಛೇರಿಯ ಅವಧಿಯಲ್ಲಿ ಸಂಪರ್ಕ ಮಾಡಿ.