ಬಾಳೆ ಬೆಳೆಯಲ್ಲಿ ಸಾಮಾನ್ಯ ಸಂದೇಹಗಳು

  1. ಬಾಳೆ ಹೆಚ್ಚು ನೀರು ಬಯಸುತ್ತದೇಕೆ ?

ಬಾಳೆ ಈ ಭೂಮಿಯ ಮೇಲಿರುವ ಅತಿ ದೊಡ್ಡ ಮರವೆಂದು ವಿಶ್ಲೇಷಿಸಬಹುದು. ಬಾಳೆ ಅತಿ ಕಡಿಮೆ ಸಮಯದಲ್ಲಿ ದೊಡ್ಡದಾಗಿ ಬೆಳೆಯುವ ಏಕೈಕ ಸಸ್ಯ ಪ್ರಭೇದ. ಅದು ಹೆಚ್ಚು ವೇಗವಾಗಿ ಬೆಳೆಯುವ ಕಾರಣ, ಬಾಳೆಗೆ ಹೆಚ್ಚು ಪೋಷಕಾಂಶಗಳ ಜೊತೆಗೆ ಹೆಚ್ಚು ನೀರು ಅವಶ್ಯವಿರುತ್ತದೆ, ಮತ್ತು ಬಾಳೆ ಗಿಡ ಸರಿ ಸುಮಾರು 75% ನೀರಿನಿಂದ ಕೂಡಿರುತ್ತದೆ, ಆ ನೀರನ್ನು ನಿರ್ವಹಿಸಲು ಹೆಚ್ಚು ನೀರು ಬಯಸುತ್ತದೆ.

2. ಬಾಳೆ ಉತ್ತಮವಾಗಿ ಬೆಳೆಯಲು ಯಾವ ಮಾದರಿಯ ಮಣ್ಣು ಉತ್ತಮವಾಗಿರುತ್ತದೆ ?

ಉತ್ತಮವಾಗಿ ಬಾಳೆ ಬೆಳೆಯಲು ಫಲವತ್ತಾದ, ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮತ್ತು ನೀರು ಬಸಿದು ಹೋಗುವಂತ ಮಣ್ಣಿರ ಬೇಕು, ಅದರ ರಸ ಸಾರ (pH) 6.0 ರಿಂದ 7.5 ಇದ್ದರೆ ಉತ್ತಮ.

3. ಬಾಳೆ ಬೆಳೆಯ ಅವಧಿ ಬಗ್ಗೆ ತಿಳಿಸಿ.

ಬಾಳೆ ಬೆಳೆಯ ಅವಧಿ ಸರಿ ಸುಮಾರು ಒಂದು ವರ್ಷ ಮತ್ತು ಒಂದು ಬಾಳೆ ಗಿಡ ಒಂದು ಗೊನೆ ನೀಡಿ ತನ್ನ ಪೂರ್ತಿ ಬಾಳಿನ ಅವಧಿ ಮುಗಿಸುತ್ತದೆ.

4. ಬಾಳೆ ನಾಟಿ ಮಾಡಿದ ಎಷ್ಟು ದಿನಕ್ಕೆ ಮರಿಗಳು ಬರುತ್ತವೆ ಮತ್ತು ಅವನ್ನು ಏಕೆ ತೆಗೆಯ ಬೇಕು ?

ಬಾಳೆ ನಾಟಿ ಮಾಡಿದ ಸುಮಾರು 2 ತಿಂಗಳಲ್ಲಿ ತಾಯಿ ಬಾಳೆಗಿಡದ ಪಕ್ಕ ಮರಿಗಳು ಬರಲಾರಂಬಿಸುತ್ತವೆ. ಇವನ್ನು ಪ್ರತಿ 45 ದಿನಕ್ಕೊಮ್ಮೆ ತೆಗೆಯುವುದು ಉತ್ತಮ, ಇಲ್ಲವಾದರೆ ತಾಯಿ ಗಿಡದ ಪೋಷಕಗಳನ್ನು ಉಪಯೋಗಿಸಿಕೊಂಡು, ಇಳುವರಿಯನ್ನು ಕಡಿಮೆ ಮಾಡುತ್ತವೆ. ಎರಡು ಮರಿ ಉಳಿಸಿ ಉಳಿದ ಮರಿಗಳನ್ನು ತೆಗೆಯುವುದು ಉತ್ತಮ.

5. ಉತ್ತಮ ಬಾಳೆ ಗಿಡಗಳ ಆಯ್ಕೆಮಾಡುವುದು ಹೇಗೆ ?

ಮೊದಲು ರೈತರು ತಾವು ಬೆಳೆಯ ಬೇಕಾದ ಬಾಳೆ ತಳಿಯನ್ನು ಅಂತಿಮಗೊಳಿಸ ಬೇಕು, ನಂತರ ರೋಗ ರಹಿತ ಕಂದುಗಳನ್ನು ಉಪಯೋಗಿಸಬಹುದು. ಆದರೆ ಅಂಗಾಂಶ ಕೃಷಿಯಲ್ಲಿ ಅಭಿವೃದ್ಧಿ ಪಡಿಸಿದ ಸಸಿಗಳನ್ನು ಬಳಸುವುದು ಉತ್ತಮ, ಕಾರಣ ಅವು ರೋಗ ರಹಿತವಾಗಿರುತ್ತವೆ.

6. ನಾಟಿ ಮಾಡಿದ ಎಷ್ಟು ದಿನಗಳಲ್ಲಿ ಗೊನೆ ಬರುತ್ತದೆ ?

ಈ ಸಮಯ ವಾತಾವರಣದ ಉಷ್ಣಾಂಶದ ಮೇಲೆ ಆಧಾರವಾಗಿರುತ್ತದೆ. ಉದಾಹರಣೆಗೆ ಹೆಚ್ಚು ತಾಪಮಾನದ ಸ್ಥಳಗಳಲ್ಲಿ 6 - 7 ತಿಂಗಳಲ್ಲಿ ಕಾಣಬಹುದು. ಕಡಿಮೆ ತಾಪಮಾನದ ಸ್ಥಳಗಳಲ್ಲಿ 8 - 9 ತಿಂಗಳುಗಳಾಗಬಹದು.

7. ಗೊನೆ ಕಂಡ ಎಷ್ಟು ತಿಂಗಳಿನಲ್ಲಿ ಗೊನೆ ಕಟಾವಿಗೆ ಬರಬಹುದು ?

ಗೊನೆ ಕಂಡ ಸುಮಾರು 3 ತಿಂಗಳುಗಳಲ್ಲಿ ಕಟಾವಿಗೆ ಬರುತ್ತದೆ.

8. ಗಿಡಗಳ ಮದ್ಯೆಯ ಅಂತರ ಎಷ್ಟಿರಬೇಕು ?

ಈ ಅಂತರವನ್ನು ರೈತರು ತಮ್ಮ ಅನಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು, ಸಾಮಾನ್ಯವಾಗಿ 6 x 6 ಅಡಿಗಳು ಉತ್ತಮ. ಕೆಲವರು 6 x 8 ಸಹ ಮಾಡುತ್ತಾರೆ. ಅಂತರ ಹೆಚ್ಚಿದರೆ ಗೊನೆಯ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ.

9. ಉತ್ತಮ ಇಳುವರಿ ಪಡೆಯಲು ತಾಯಿ ಬಾಳೆ ಗಿಡದಲ್ಲಿ ಯಾವಾಗಲೂ ಎಷ್ಟು ಎಲೆಗಳು ಇರುವಂತೆ ನೋಡಿಕೊಳ್ಳಬೇಕು ?

ಬಾಳೆಯಲ್ಲಿ ಎಲೆಯ ಪಾತ್ರ ಬಹಳ ಮುಖ್ಯ, ಉತ್ತಮ ಇಳುವರಿ ಪಡೆಯಲು ಸುಮಾರು 10 -12 ಎಲೆ ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕು.

10. ಬಾಳೆಯ ಬೆಳೆಗೆ ತಗಲುವ ಯಾವ ರೋಗ ಹೆಚ್ಚು ಅಪಾಯಕಾರಿ ?

"ಬಂಚಿ ಟಾಪ್" ರೋಗವು ಅತಿ ಅಪಾಯಕರ ರೋಗವಾಗಿದ್ದು, ಹೆಚ್ಚು ಸಾಂಕ್ರಾಮಿಕ ಮತ್ತು ಬೆಳೆ ನಷ್ಟ ಅತಿ ಹೆಚ್ಚು.

11. ಪನಾಮಾ ವಿಲ್ಟ್ / ಫಿಸೇರಿಯಂ ಅಂದರೇನು ?

ಪನಾಮ ವಿಲ್ಟ್ / ಫಿಸೇರಿಯಂ ಅಪಾಯಕಾರಿ ಸಾಂಕ್ರಾಮಿಕ ರೋಗವಾಗಿರುತ್ತದೆ, ಇದರಿಂದಲೂ ಬೆಳೆ ನಷ್ಟ ಹೆಚ್ಚು. ಇದು ಕಂದುಗಳ ಮುಖಾಂತರ ಮತ್ತು ವಾತಾವರಣದ ಏರುಪೇರಿನಿಂದ ಬರುತ್ತದೆ.

12. ಪನಾಮ ವಿಲ್ಟ್ / ಫಿಸೇರಿಯಂ ರೋಗಕ್ಕೆ ನಿರೋಧ ಒಡ್ಡುವ ಬಾಳೆ ತಳಿಗಳಿವೆಯೆ ? ಇದ್ದರೆ ಯಾವುವು ?

ಪನಾಮ ವಿಲ್ಟ್ / ಫಿಸೇರಿಯಂ ಬಾಳೆ ರೋಗಕ್ಕೆ ಉತ್ತಮ ರೋಗ ನಿರೋಧಕ ಶಕ್ತಿ ಇರುವ ತಳಿಗಳು ಇದುವರೆವಿಗು ಕಂಡು ಬಂದಿಲ್ಲ.

13. ಬಾಳೆಯಲ್ಲಿ ಯಾವ ಬೆಳೆಗಳನ್ನು ಅಂತರ ಬೆಳೆಗಳಾಗಿ ಬೆಳೆಯ ಬಹದು ?

ಬಾಳೆಯಲ್ಲಿ ಅಂತರ ಬೆಳೆಗಳಾಗಿ ಅನೇಕ ಅಂತರ ಬೆಳೆಗಳನ್ನು ಬೆಳೆಯ ಬಹುದು. ಉದಾಹರಣೆಗೆ: ಶೇಂಗ, ಈರುಳ್ಳಿ, ಬೆಳ್ಳುಳ್ಳಿ, ಬೀಟ್ರೋಟ್, ಸೂವರ್ಣ ಗಡ್ಡೆ, ಸೆಣಬು ಹೀಗೆ.

14. ಬಾಳೆಯಲ್ಲಿ ಯಾವ ಬೆಳೆಗಳನ್ನು ಅಂತರ ಬೆಳೆಗಳಾಗಿ ಬೆಳೆಯ ಬಾರದು ?

ಬಾಳೆಯಲ್ಲಿ ಹೆಚ್ಚು ಕೀಟಾಕರ್ಷಕ ಬೆಳೆಗಳಾದ ಬದನೆ ಮತ್ತು ಸೌತೆಕಾಯಿ ಜಾತಿಯ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯ ಬಾರದು. ಬೆಳೆದಲ್ಲಿ ಕೀಟಗಳಿಂದ ಹೆಚ್ಚು ತೊಂದರೆ ಅನುಭವಿಸಬೇಕಿರುತ್ತದೆ.

15. ಬಾಳೆಯಲ್ಲಿ ಅಪಾಯಕಾರಿ ಶಿಲೀಂದ್ರ ಸೋಂಕು ಯಾವುದು ?

ಸಿಗಟೊಕಾ ಲೀಫ್ ಸ್ಪಾಟ್ (ಎಲೆ ಮೇಲೆ ಮಚ್ಚೆಗಳು) ಇದು ಒಂದು ಅಪಾಯಕಾರಿ ಶಿಲೀಂದ್ರ ಸೋಂಕಾಗಿರುತ್ತದೆ

16. ಬಾಳಯಲ್ಲಿ "ಬಂಚಿ ಟಾಪ್" ರೋಗವನ್ನು ಗುರುತಿಸುವುದು ಹೇಗೆ ?

ಈ ರೋಗವನ್ನು "ಕ್ಯಾಬೇಜ್ ಟಾಪ್" ಅಂತಲೂ ಕರೆಯುತ್ತರೆ. ಗಿಡವನ್ನು ಮೇಲಿಂದ ನೋಡಿದರೆ ಎಲೆ ಕೋಸಿನ ತರಹ ಕುಬ್ಜ ಎಲೆಗಳು ಒಟ್ಟಿಗೆ ಗುಚ್ಚದಂತೆ ಕಾಣಿಸುತ್ತವೆ. ಇದು ಒಂದು ವೈರಸ್ ಸೋಂಕಾಗಿದ್ದು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುತ್ತದೆ.

17. ಬಾಳೆಗೆ ಹೆಚ್ಚಿಗೆ ಕಾಡುವ ಕೀಟಗಳು ಯಾವುವು ?

ರೈಝೋಮ್ ವೀವಿಲ್ ಎಂಬ ಕೀಟ ಗಿಡದ ಬುಡದಲ್ಲಿ ರಂದ್ರ ಮಾಡಿ ಕಂದಿನಲ್ಲಿ ಸೇರಿಕೊಂಡು ಬೆಳೆ ನಷ್ಟಮಾಡುತ್ತದೆ, ಮತ್ತು ಕೆಲ ರಸ ಹೀರುವ ಹೇನುಗಳು.

18. ಬಾಳೆಗೆ "ಫಿಸೇರಿಯಂ ಅಥವಾ ಪನಾಮ ವಿಲ್ಟ್" ಬಂದಿರುವುದು ಗುರುತಿಸುವುದು ಹೇಗೆ ?

ಬಾಳೆಗೆ ಈ ರೋಗವು "Fusarium oxysporum" ಎಂಬ ಶಿಲೀಂದ್ರದಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಬಾಳೆ ಗೊನೆ ಹಾಕುವ ವಯಸ್ಸಿಗೆ ಬಂದಾಗ ಕಾಣಿಸಿಕೊಳ್ಳಲಾರಂಬಿಸುತ್ತದೆ. ಇದರ ಭೌತಿಕ ಲಕ್ಷಣಗಳ ಪ್ರಕಾರ ಕೆಳಗಿನ ಎಲೆಗಳನ್ನು ಬಿಟ್ಟು ಮೇಲಿರುವ ಎಲೆಗಳು ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗಿರುತ್ತವೆ. ಗಿಡ ಅಥವಾ ಮರಗಳಲ್ಲಿ ಚೈತನ್ಯವಿರುವುದಿಲ್ಲ. ರೋಗವುಳ್ಳ ಗಿಡದ ಬುಡವನ್ನು ಅಡ್ಡಲಾಗಿ ಕತ್ತರಿಸಿದಾಗ ಕಪ್ಪು ಅಥವಾ ಕಂದು ಬಣ್ಣದ ಅವಶೇಷಗಳನ್ನು ಕಾಣ ಬಹುದು. ಕೆಳಗಿನ ಕೆಳವು ಚಿತ್ರಗಳನ್ನು ನೋಡಬಹುದು.

ಪನಾಮ ವಿಲ್ಟ್ ಅಥವಾ ಫಿಸೇರಿಯಂ

ಪನಾಮ ರೋಗ ಬಂದಿರುವ ಬಾಳೆ ಗಿಡ

ಪನಾಮ ವಿಲ್ಟ್ ಅಥವಾ ಫಿಸೇರಿಯಂ

ಪನಾಮ ರೋಗ ಬಂದಿರುವ ಬಾಳೆಯ ಬುಡ ಸೀಳಿದಾಗ ಹೀಗೆ ಕಾಣಿಸುತ್ತದೆ

ಪನಾಮ ವಿಲ್ಟ್ ಅಥವಾ ಫಿಸೇರಿಯಂ

ಪನಾಮ ರೋಗ ತಗುಲಿರುವ ಬಾಳೆ ತೋಟ

19. ಪನಾಮ ವಿಲ್ಟ್ ಅಥವಾ ಫಿಸೇರಿಯಂ ರೋಗ ಬಂದಿರುವ ಗಿಡಗಳನ್ನು ಹಾರೈಕೆ ಮಾಡಿ ಬೆಳೆ ತೆಗೆಯ ಬಹುದೆ ? ತೆಗೆಯ ಬಹುದಾದರೆ ನಿರ್ವಹಣೆ ಹೇಗೆ ?

ಪನಾಮ ರೋಗ ಗುಣಮುಖವಾಗಿರವುದು ಕಂಡುಬಂದಿಲ್ಲವಾದರೂ, ರೋಗದ ಜೊತೆ ಬೆಳೆ ನಿರ್ವಹಣೆ ಮಾಡಿ ಬೆಳೆ ತೆಗೆಯಬಹುದಾಗಿದೆ. ಇರುವ ಬೆಳೆಯ ಫಸಲು ತೆಗೆದುಕೊಂಡ ನಂತರ, ಕೂಳೆ ಬೆಳೆ ಮಾಡುವುದು ಬೇಡ.

ಇಂತಹ ರೋಗಗ್ರಸ್ಥ ತೋಟಗಳನ್ನು ಕೆಳಗಿನಂತೆ ನಿರ್ವಹಿಸಿದರೆ ತಕ್ಕಮಟ್ಟಿಗೆ ಇಳುವರಿಯನ್ನು ತೆಗೆದುಕೊಳ್ಳಬಹುದು.

  1. ರೋಗ ಲಕ್ಷಣ ಕಂಡ ತಕ್ಷಣ "AVAF-18" ದ್ರಾವಣವನ್ನು ಒಂದು ಲೀ. ನೀರಿಗೆ 5 ಮಿ.ಲಿ. ಪ್ರಕಾರ ಮಿಶ್ರಣ ಮಾಡಿಕೊಂಡು ಪ್ರತಿ ಬಾಳೆ ಗಿಡ ಬುಡಕ್ಕೆ 1 ಲೀಟರ್ ನಷ್ಡು ನೀಡುವುದು.,

  2. AISHWARYA ಎಂಬ ದ್ರಾವಣವನ್ನು 1 ಲೀ. ನೀರಿಗೆ 5 ಮಿ.ಲಿ ಬೆರೆಸಿಕೊಂಡು ಸಿಂಪಡಿಸುವುದು.

  3. ಒಂದು ವಾರದ ನಂತರ (AVAF-18 ನಿಂದ ಉಪಚರಿಸಿದನಂತರ) SOIL STAR BANANA BOOMER ದ್ರಾವಣವನ್ನು 10 ಲೀ ಒಂದು ಎಕರೆಗೆ ನೀಡುವುದು.

ಕೆಲ ದಿನಗಳಲ್ಲಿ ರೋಗ ಲಕ್ಷಣಗಳು ಕಡಿಮೆಯಾದಂತೆ ಕಾಣಿಸುತ್ತವೆ, ಗಿಡದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಮತ್ತೆ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ, ಹಾಗೆ ಮತ್ತೆ ಕಾಣಿಸಿಕೊಂಡಲ್ಲಿ ಮೇಲೆ ನೀಡಿರುವ 2 ಮತ್ತು 3ನೇ ಸಾಲಿನಲ್ಲಿ ಹೇಳಿರುವ ವಿಧಾನಗಳನ್ನು ಇನ್ನೊಮ್ಮೆ ಅನುಸರಿಸುವುದು.

20. "ಬಂಚಿ ಟಾಪ್" ಅಥವಾ "ಕ್ಯಾಬೇಜ್ ಟಾಪ್" ರೋಗ ಬಂದಿರುವ ಬಾಳೆ ಗುರುತಿಸುವುದು ಹೇಗೆ ?

ಬಂಚಿ ಟಾಪ್ ಅಥವಾ ಕ್ಯಾಬೇಜ್ ಟಾಪ್ ರೋಗವಿರುವ ಬಾಳೆ ಗಿಡಗಳನ್ನು ಅತಿ ಸುಳಬವಾಗಿ ಗುರುತಿಸಬಹುದು ಅವುಗಳನ್ನು ಮೇಲಿನಿಂದ ಗಮನಿಸಿದಾಗ ಕುಬ್ಜ ಎಲಗಳ ಗುಚ್ಚದಂತೆ ಕಾಣಿಸುತ್ತವೆ, ಕೆಲ ಚಿತ್ರಗಳನ್ನು ಕೆಳಗೆ ತೋರಿಸಿದೆ.

ಬಂಚಿ ಟಾಪ್ ರೋಗ ಗ್ರಸ್ಥ ಬಾಳೆ


ಬಂಚಿ ಟಾಪ್ ರೋಗ ಗ್ರಸ್ಥ ಬಾಳೆ


ಬಂಚಿ ಟಾಪ್ ರೋಗ ಗ್ರಸ್ಥ ಬಾಳೆ


21. ಬಂಚಿ ಟಾಪ್ ರೋಗ ಗ್ರಸ್ಥ ಬೆಳೆಯನ್ನು ನಿರ್ವಹಣೆ ಮಾಡಬಹುದೇ ? ಮಾಡಬಹುದಾದರೆ ಹೇಗೆ ?

ಬಂಚಿ ಟಾಪ್ ರೋಗವು ಒಂದು ವೈರಾಣ ಕಾರಣದಿಂದ ಬರುತ್ತದೆ ಮತ್ತು ಬಹಳ ಸಾಂಕ್ರಾಮಿಕವಾಗಿರುತ್ತದೆ, ಇದುವರೆವಿಗೂ ಇದರಿಂದ ಬಳಲುತ್ತಿರುವ ಗಿಡ ಅಥವಾ ತೋಟಗಳನ್ನು ರಕ್ಷಿಸಲು ಯಾವುದೇ ರಾಸಾಯನಿಕವಾಗಲಿ, ವಿಧಾನಗಳಾಗಲಿ ತಿಳಿದು ಬಂದಿಲ್ಲ. ಆದ ಕಾರಣ ಈ ಬೆಳೆಯನ್ನು ತೆಗೆಯುವುದು ಸೂಕ್ತ, ಅದೇ ನೆಲದಲ್ಲಿ ಮತ್ತೆ ಹಲವು ವರ್ಷಗಳು ಬಾಳೆ ಬೆಳೆ ಮಾಡದಿರುವುದು ಒಳಿತು.

ಆದರೂ ಒಂದು ಅವಕಾಶವಿದೆ, ಬಹಳ ಆರಂಭದ ಹಂತದಲ್ಲಿ ಈ ರೋಗವನ್ನು ಗುರುತಿಸಿ

  1. ರೋಗಗ್ರಸ್ಥ ಗಿಡಗಳನ್ನು ತಕ್ಷಣವೇ ಗಡ್ಡೆಯ ಸಹಿತ ತೆಗೆದು ನಾಶಪಡಿಸುವುದು.

  2. ಅದೆ ಸ್ಥಳದಲ್ಲಿ AVAF-18 ದ್ರಾವಣವನ್ನು 10 ಮಿ.ಲೀ ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಆ ಸ್ಥಳದಲ್ಲಿ ಸುರಿಯುವುದು ಮತ್ತು ಈ ವಿಧಾನವನ್ನು ಪ್ರತಿ 7 ದಿನಕ್ಕೊಮ್ಮೆ ಮೂರು ಸಲ ಮಾಡುವುದು.

  3. ಆರೋಗ್ಯಕರ ಗಿಡಗಳಿಗೆ ಒಮ್ಮೆ AVAF-18 ದ್ರಾವನದ ಮಿಶ್ರಣವನ್ನು 5 ಮಿ.ಲೀ.ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಬುಡದಲ್ಲಿ ನೀಡುವುದು.

  4. ಒಂದು ವಾರದ ನಂತರ ಆರೋಗ್ಯಕರ ಗಿಡಗಳಿಗೆ ಒಂದು ಎಕರೆಗೆ 10 ಲೀ. SOIL STAR - BANANA BOOMER ನೀಡುವುದು.

  5. ತೋಟದ ಮೇಲೆ ಪ್ರತಿ ನಿತ್ಯ ತಪ್ಪದೆ ಗಮನ ಹರಿಸುವುದು.

22. ಬಾಳೆಗೆ ಬರುವ "ಸಿಗಾಟೊಕಾ ಲೀಫ್ ಸ್ಪಾಟ್" ರೋಗದ ಬಗ್ಗೆ

"ಸಿಗಾಟೊಕಾ ಲೀಫ್ ಸ್ಪಾಟ್" ರೋಗವು ಒಂದು ಶಿಲೀಂದ್ರಕಾರಕವಾಗಿದ್ದು, ಇದರಿಂದ ಎಲೆಯ ಭಾಗವು ಹಾಳಾಗಿ, ಗಿಡದ ಆಹಾರೋತ್ಪದನೆಯ ಮೇಲೆ ಪರಿಣಾಮವಾಗಿ ಗಿಡ ಮತ್ತು ಇಳುವರಿಯ ಮೇಲೆ ಪರಿಣಾಮ ಬೀಳುತ್ತದೆ. ಮತ್ತು ಇದು ಸಾಂಕ್ರಾಮಿಕವಾಗಿದ್ದು ಇತರೆ ಗಿಡ ಮತ್ತು ಹಣ್ಣುಗಳ ಮೇಲೂ ಕಪ್ಪು ಚುಕ್ಕೆಗಳಾಗಿ ಕಾಣಿಸುತ್ತದೆ. ಇದು ಬೆಳೆಯ ಯಾವ ವಯಸ್ಸಿನಲ್ಲಾದರು ಬರುವ ಸಂಭವವಿರುತ್ತದೆ. ಈ ರೋಗದಿಂದ ಬಳಲುತ್ತಿರುವ ಗಿಡಗಳ ಮತ್ತು ಎಲೆಗಳ ಕೆಲ ಚಿತ್ರಗಳನ್ನು ಈ ಕೆಳಗೆ ನೋಡ ಬಹುದು.

ಸಿಗಾಟೋಕ ಲೀಫ್ ಸ್ಪಾಟ್


ಸಿಗಾಟೋಕ ಲೀಫ್ ಸ್ಪಾಟ್


ಸಿಗಾಟೋಕ ಲೀಫ್ ಸ್ಪಾಟ್


23. ಸಿಗಾಟೋಕ ಲೀಫ್ ಸ್ಪಾಟ್ ರೋಗವಿರುವ ಬಾಳೆ ತೋಟದ ನಿರ್ವಹಣೆ ಸಾವಯವ ಪದ್ಧತಿಗಳಲ್ಲಿ ಮಾಡುವುದು ಹೇಗೆ ?

ಈ ರೋಗದಿಂದ ಬಾಳೆ ಬೆಳೆಯನ್ನು ಈ ಕೆಳಗಿನಂತೆ ಸಾವಯವದಲ್ಲಿ ನಿರ್ವಹಿಸ ಬಹುದಾಗಿದೆ.

  1. ಬಾಳೆ ಗಿಡದ ಬುಡದ ಸುತ್ತೂ ಬಾಳೆ ಎಲೆ ಅಥವಾ ಯಾವುದೇ ಸಾವಯವ ತ್ಯಾಜ್ಯವನ್ನು ಹರಡಿ ಹಾವಿಯನ್ನು ಬಾಳೆ ಎಲೆಗಳಿಗೆ ತಾಗದಂತೆ ಮಾಡುವುದು.

  2. ಸಾಮಾನ್ಯವಾಗಿ ಮೊದಲ ಹಂತದ ರೋಗದಲ್ಲಿ ಕೆಳ ಭಾಗದ ಎಲೆಗಳಲ್ಲಿ ಈ ಸೋಂಕನ್ನು ಗುರುತಿಸಬಹುದು, ತಕ್ಷಣ ಆ ಎಲೆಗಳನ್ನು ತೆಗೆದು, ಬೆರೆ ಎಲೆ ಅಥವಾ ಗಿಡಗಳಿಗೆ ತಾಗದಂತೆ ತೋಟದಿಂದ ಹೊರ ತಂದು ಸುಟ್ಟುಹಾಕುವುದು.

  3. AVAF-18 ದ್ರಾವಣವನ್ನು ಒಂದು ವಾರದ ಅಂತರದಲ್ಲಿ 2 ಸಲ ಒಂದು ಲೀ. ನೀರಿಗೆ 2.5 ಮಿ.ಲಿ. ಯಂತೆ ಮಿಶ್ರಣ ಮಾಡಿಕೊಂಡು ಸಿಂಪಡಿಸುವುದು, ವಿಶೇಷವಾಗಿ ಎಲೆ ಕೆಳಬಾಗದಲ್ಲಿ.

  4. ಇದೇ ಸಮಯದಲ್ಲಿ SOIL STAR BANANA BOOMER ದ್ರಾವಣವನ್ನು ಒಂದು ಎಕರೆಗೆ 10 ಲೀ. ಗಿಡದ ಬುಡಕ್ಕೆ ನೀಡುವುದು.

24. ಎಳೆ ಬಾಳೆ ಗಿಡಗಳ ಎಲೆಗಳ ಮೇಲೆ ಕಂದು ಬಣ್ಣದ ಕುರುಹುಗಳು(ಮಚ್ಚೆ) ರೋಗ ಕಾರಣವೇ ?

ಎಳೆ ಬಾಳೆ ಗಿಡಗಳ ಎಲೆಗಳ ಮೇಲೆ ಕಂದು ಬಣ್ಣದ ಮಚ್ಚೆಗಳು ಸಾಮಾನ್ಯ, ಇವು ಯಾವುದೇ ತರಹದ ರೋಗ ಲಕ್ಷಣಗಳಲ್ಲ ಮತ್ತು ಅವುಗಳ ಉತ್ತಮ ಆರೋಗ್ಯದ ಗುಣ ಲಕ್ಷಣಗಳಾಗಿವೆ. ಕೆಲ ಚಿತ್ರಗಳನ್ನು ಈ ಕೆಳಗೆ ತೋರಿಸಲಾಗಿದೆ, ಇದರಿಂದ ಯಾವುದೇ ತರಹ ಚಿಂತಿಸುವುದು ಬೇಡ.

ಕಂದು ಬಣ್ಣದ ಮಚ್ಚೆಗಳು


ಕಂದು ಬಣ್ಣದ ಮಚ್ಚೆಗಳು


25. ಬಾಳೆ ಗಿಡದ ಬುಡ ಉದ್ದುದ್ದವಾಗಿ ಸೀಳುತ್ತಿದೆ.

ಬಾಳೆಯಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಅಗತ್ಯ ಪೋಷಕಗಳ ಕೊರತೆಯಿಂದುಂಟಾಗುತ್ತದೆ. ಆದ ಕಾರಣ ಈ ಕೆಳಗೆ ವಿವರಿಸಿದ ಹಾಗೆ ನಿರ್ವಹಣೆ ಮಾಡಿದಲ್ಲಿ ಈ ಸಮಸ್ಯೆಯನ್ನು ಬಗೆಹಿರಿಸಬಹುದಾಗಿದೆ.

  1. IIHR ರವರ BANANA SPECIAL ಮತ್ತು AISHWARYA ಎರಡರ ಮಿಶ್ರಣವನ್ನು ಎಲೆಗಳ ಮೇಲೆ ಸಿಂಪಡಣೆ ಮಾಡುವುದು.

  2. SOIL STAR BANANA BOOMER ದ್ರಾವಣವನ್ನು ಪ್ರತಿ ಒಂದು ಎಕರೆಯ ಬೆಳೆಗೆ 10 ಲೀ. ಗಿಡಗಳ ಬುಡಕ್ಕೆ ನೀಡುವುದು.

ಈ ಸಮಸ್ಯೆಯನ್ನು ತೋರಿಸುವ ಕೆಲ ಚಿತ್ರಗಳನ್ನು ಈ ಕೆಳಗೆ ತೋರಿಸಿದೆ.

26. ಬಾಳಯಲ್ಲಿ ಕ್ಲೋರೋಸಿಸ್ ಮತ್ತು ನೆಕ್ರೋಸಿಸ್ ಅಂದರೇನು ?

ಈ ಸಮಸ್ಯೆಯಿಂದ ನೆರಳುತ್ತಿರುವ ಬಾಳೆ ಗಿಡಗಳು ಕೆಳಗೆ ತೋರಿಸಿರುವ ಚಿತ್ರಗಳಲ್ಲಿರುವಂತೆ ಕಾಣಿಸುತ್ತದೆ. ಕ್ಲೋರೋಸಿಸ್ ಮತ್ತು ನೆಕ್ರೋಸಿಸ್ ಸಮಸ್ಯೆಗೆ ಕಾರಣ ಹಲವು ಪೋಷಕಗಳ ತೀವ್ರ ಕೊರತೆ. ಉದಾಹರಣೆಗೆ: ಮಣ್ಣಿನ ರಸಸಾರ (pH)ದಲ್ಲಿನ ವ್ಯತ್ಯಾಸ, ಮಣ್ಣಿನಲ್ಲಿರುವು ಅತಿಹೆಚ್ಚು ಪಾಸ್ಫೇಟ್ ಗಳು. ರಂಜಕ, ಬೋರಾನ್, ಮ್ಯಗ್ನೀಷಿಯಂ, ಕ್ಯಾಲ್ಷಿಯಂ, ಕಬ್ಬಿಣ. ಮತ್ತು ನೀರಿನ ಕೊಡುವ ವಿಧಾನದಲ್ಲಿ ಹೆಚ್ಚು ಏರುಪೇರಾದರೂ ಈ ಸಮಸ್ಯೆ ಇರುತ್ತದೆ.

ಕ್ಲೋರೋಸಿಸ್ ಮತ್ತು ನೆಕ್ರೋಸಿಸ್ ಪೀಡಿತ ಬಾಳೆ ಗಿಡ.


27. ಬಾಳೆಯಲ್ಲಿ ಕ್ಲೋರೋಸಿಸ್ ಮತ್ತು ನೆಕ್ರೋಸಿಸ್ ಸಮಸ್ಯೆ ಕಾಡಲು ಕಾರಣಗಳೇನು ?

ಬಾಳೆಯ ಈ ಸಮಸ್ಯೆಗೆ ಕಾರಣಗಳು ಹಲವು, ಇಂತಹ ಸಮಸ್ಯೆಗಳನ್ನು ಪರಿಹರಿಸಲು ಯೋಜಿತ ಬೆಳೆಪದ್ಧತಿಗಳನ್ನು ಅನುಸರಿಸುವುದು. ಆದರೂ ಇಂದಿನ ವೈಜ್ಞಾನಿಕ ಕಾರಣಗಳು.

  1. ಮಣ್ಣಿನ ರಸಸಾರ (pH)ನಲ್ಲಿ ವ್ಯತ್ಯಾಸ.

  2. ಮಣ್ಣಿನಲ್ಲಿ ಹೆಚ್ಚಿದ ಫಾಸ್ಪೇಟ್, ಸಲ್ಫೇಟ್ ಮತ್ತು ನೈಟ್ರೇಟ್ ಅಂಶಗಳು.

  3. ಅತಿ ಕಡಿಮೆ ರಂಜಕ, ಬೋರಾನ್ ಮತ್ತು ಕ್ಯಾಲ್ಷಿಯಂ.

  4. ಅತಿ ಹೆಚ್ಚು ಕಬ್ಬಿಣದ ಸರಬರಾಜು.

  5. ಅಸಮತೋಲನ ನೀರು ಸರಬರಾಜು

  6. ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ ಕೊರತೆ.

  7. ಬೇರುಗಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದು ಕೊಂಡಾಗಲೂ ಹಿಗಾಗುವುದುಂಟು.

28. ಬಾಳೆಯಲ್ಲಿ ಕ್ಲೋರೋಸಿಸ್ ಮತ್ತು ನೆಕ್ರೋಸಿಸ್ ಸಮಸ್ಯೆಯಿಂದ ಬೆಳೆ ತೆಗೆಯುವುದು ಹೇಗೆ ?

ಬಾಳೆಗೆ ಈ ರುಜಿನಕ್ಕೆ ಮುಖ್ಯ ಕಾರಣ ರೈತರ ನಿರ್ಲಕ್ಷ್ಯ, ಸರಿಯಾದ ಭೂಮಿಯ ಆಯ್ಕೆ, ಗುಣಮಟ್ಟದ ನೀರು ಮತ್ತು ಕೃಷಿ ಅಧಿಕಾರಿಗಳ ಅಥವಾ ಕೃಷಿ ತಜ್ಞನರ ಸಲಹೆಯಂತೆ ಬೆಳೆ ಮಾಡಬೇಕಿರುತ್ತದೆ. ಆದರೂ ನಮ್ಮ ಅನುಭವದಲ್ಲಿ ಈ ಕೆಳಗಿನ ವಿಧಾನಗಳನ್ನು ಪಾಲಿಸಿದಲ್ಲಿ ಬೆಳೆಯನ್ನು ತಕ್ಕಮಟ್ಟಿಗೆ ನಿರ್ವಹಿಸಬಹುದಾಗಿದೆ.

  1. ನೀರನ್ನು ಹದವಾಗಿ ನೀಡುವುದು.

  2. ಸಾಯಿಲ್ ಸ್ಟಾರ್ ಅಡ್ವಾಸ್ಡ್ (SOIL STAR ADVANCED) / KRUSHI NIRMAN / SOIL REFRESH ದ್ರಾವಣಗಳನ್ನು 20 - 25 ML ಪ್ರತಿ ಗಿಡಕ್ಕೆ ನೀಡುವುದು.

  3. ಐಶ್ವರ್ಯ (AISHWARYA) / ಪ್ಲಾಂಟ್ ರೀಫ್ರೆಷ್ (PLANT REFRESH) ದ್ರಾವನವನ್ನು 5ML, ಒಂದು ಲೀ ನಿರಿಗೆ ಬೆರೆಸಿ ಸಿಂಪಡಿಸುವುದು. ಈ ವಿಧಾನವನ್ನು ಹೆಚ್ಚಿನ ಸಲ ಬಳಬೇಕಿರುತ್ತದೆ.


29. ಕಡಿಮೆ ನೀರಿನಲ್ಲಿ ಬಾಳೆ ಕೃಷಿ ಮಾಡುವುದು ಹೇಗೆ ?

ಯೋಜಿತ ಮತ್ತು ವ್ಯವಸ್ಥಿತವಾಗಿ ಬಾಳೆ ಕೃಷಿಯನ್ನು ಮಾಡಿದಲ್ಲಿ, ಅನೇಕ ಅನಿರೀಕ್ಷಿತ ಸಮಸ್ಯೆಗಳಿಗೆ ಸುಲಭ ಮತ್ತು ಉತ್ತಮ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ಹಾಗೆಯ ಬಾಳೆಯಲ್ಲೂ ಸಹ ಸಾಧ್ಯ, ಆದರೆ ಬೆಳೆ ಇಡುವ ಮೊದಲೆ ರೈತರು ನಮ್ಮ "ಕೃಷಿಸಲಹಾ"ವನ್ನು ಸಂಪರ್ಕಮಾಡಿ "ಅಕ್ಷಯ ಪೂರ್ಣ" ಪದ್ಧತಿಯನ್ನು ಅನುಸರಿಸಿ ಬಾಳೆ ಕೃಷಿ ಮಾಡಿದಲ್ಲಿ, ಬರಪರಿಸ್ಥಿತಿಯಲ್ಲೂ ಕಡಿಮೆ ನೀರಿನಲ್ಲಿ ಬೆಳೆ ನಿರ್ವಹಣೆ ಮಾಡಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಕೃಷಿಸಲಹಾವನ್ನು ಸೋಮವಾರದಿಂದ ಶುಕ್ರವಾರದವರೆವಿಗೆ ಬೆಳಗ್ಗೆ 10:00ರಿಂದ ಸಂಜೆ 5:00ರೊಳಗೆ ಸಂಪರ್ಕಿಸಿ.

30. ಇರವಿನಿಯಾ ಕೊಳೆ (ERWINIA ROT) ಅಂದರೇನು ? ಇದನ್ನು

ಹತೋಟಿಯಲ್ಲಿಟ್ಟು ಬೆಳೆ ತೆಗೆಯುವುದು ಹೇಗೆ ?

ಇದು ಸೂಕ್ಷ್ಮ ಜೀವಿಗಳಿಂದುಂಟಾಗುವ ಕೊಳೆ ರೋಗವಾಗಿದ್ದು, ನೆಲದಿಂದ ಪ್ರಾರಂಭವಾಗುವು ಬುಡದ ಹತ್ತಿರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗ ಕಂಡುಬಂದಲ್ಲಿ ಕಟ್ಟ ವಾಸನೆ ಕಂಡುಬರುತ್ತದೆ. ಇದರಿಂದ ಖಚಿತವಾಗಿ ಬೆಳೆ ಮತ್ತು ಇಳುವರಿಗೆ ನಷ್ಠವುಂಟಾಗುತ್ತದೆ.

ಪರಿಹಾರೋಪಾಯಗಳು:

  1. ನೀರನ್ನು ಹದವಾಗಿ ಬಳಕೆ ಮಾಡುವುದು, ಆದಷ್ಟು ನೀರು ಹರಿಸುವ ಬದಲು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದು ಉತ್ತಮ.

  2. ರೋಗ ಗ್ರಸ್ಥ ಗಿಡಗಳನ್ನು ತೆಗೆದು ನಾಶ ಪಡಿಸಿ.

  3. ಅಂಗಾಂಶ ಕೃಷಿಯ ಸಸಿಗಳನ್ನು ಬಳಸುವುದರಿಂದ ಈ ರೋಗ ಬರುವುದನ್ನು ಸ್ವಲ್ಪಮಟ್ಟಿಗೆ ತಪ್ಪಿಸಬಹುದು.

  4. ಈ ರೋಗ ಹರಡುವುದನ್ನು ತಡೆಗಟ್ಟಲು, ಎಲ್ಲಾ ಗಿಡಗಳಿಗೆ AVAF-18 ದ್ರಾವಣವನ್ನು 5ml / Liter ನೀರಿಗೆ ಬೆರೆಸಿ ಬುಡಕ್ಕೆ ನೀಡುವುದು. ಮತ್ತು ಇದೇ ವಿಧಾನವನ್ನು ಒಂದು ವಾರದ ಅಂತರದಲ್ಲಿ 2 ರಿಂದ 3 ಸಲ ನೀಡುವುದು.

  5. ಕೊನೆಯ ವಾರದಲ್ಲಿ SOIL STAR BANANA BOOMER ದ್ರಾವಣವನ್ನು 20 ml ಒಂದು ಗಿಡದ ಬುಡಕ್ಕೆ ನೀಡುವುದು.